ವಾ.ಕ.ರ.ಸಾ.ಸಂಸ್ಥೆಗೆ ಸ್ವಾಗತ

ಸಾರ್ವತ್ರಿಕ ವರ್ಗಾವಣೆ


ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ : ಕೇಂದ್ರ ಕಛೇರಿ : ಹುಬ್ಬಳ್ಳಿ

ಅ) ವರ್ಗಾವಣಾ ವಿಧಾನ ಮತ್ತು ವೇಳಾಪಟ್ಟಿ:
1.ವರ್ಗಾವಣೆ ಬಯಸುವ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಆನಲೈನ್ ಮುಖಾಂತರವೇ ಅರ್ಜಿ ಸಲ್ಲಿಸತಕ್ಕದ್ದು. (ಅರ್ಜಿ ಸಲ್ಲಿಸಿದ ನಂತರ ಅರ್ಜಿಯನ್ನು ಮುದ್ರಿಸಿಕೊಂಡು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸಂಬಂಧಿಸಿದ ಘಟಕ ವ್ಯವಸ್ಥಾಪಕರ ಮುಖಾಂತರ ಕಳುಹಿಸಿಕೊಡುವುದು)
ಬ) ವರ್ಗಾವಣೆಗೆ ಅರ್ಜಿ ಸಲ್ಲಿಸಲು ಕನಿಷ್ಟ ಅರ್ಹತೆಗಳು:
1.ವರ್ಗಾವಣೆ ಅರ್ಜಿ ಸಲ್ಲಿಸಲು ಬಯಸುವ ಸಿಬ್ಬಂದಿ ಸೇವೆಯಲ್ಲಿ ಖಾಯಂಗೊಂಡಿರಬೇಕು.(Only Confirmed Employees).
2.ಪ್ರಸ್ತುತ ಕಾರ್ಯಸ್ಥಳದಲ್ಲಿ ಪರೀಕ್ಷಾರ್ಥ ದಿನಾಂಕದಿಂದ ಅಥವಾ ವಿಭಾಗ / ಘಟಕಕ್ಕೆ ವರ್ಗಾವಣೆಗೊಂಡ ಹಾಜರಾದ ದಿನಾಂಕದಿಂದ ಮೂರು(3) ವರ್ಷ ಸೇವೆ ಸಲ್ಲಿಸಿರಬೇಕು. (Trainee date not to be considered-From Probationary date) (ಮೇಲ್ಕಂಡ ಅರ್ಹತೆಗಳು ಇಲ್ಲದಿದ್ದಲ್ಲಿ, ಉದ್ಯೋಗಿಗಳು ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.)
3.ಶಿಸ್ತು ಪ್ರಕರಣಗಳಲ್ಲಿ ಇಲಾಖಾ ವಿಚಾರಣೆ ಬಾಕಿ ಇರುವ ನೌಕರರು ವರ್ಗಾವಣೆಗೆ ಅರ್ಹರಿರುವುದಿಲ್ಲ.
4.ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿರುವ / ಭಾಗಿಯಾಗಿರುವ ನೌಕರರು ಅರ್ಹರಿರುವುದಿಲ್ಲ.
ಕ)ವರ್ಗಾವಣೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳಿಗೆ ವಿನಾಯಿತಿ ನೀಡುವ ಪ್ರಕರಣಗಳು:
1.ನೌಕರರು ತೀವ್ರ ತರಹದ ಅನಾರೋಗ್ಯ ಪ್ರಕರಣಗಳು (ಹೆಚ್.ಐ.ವಿ, ಹೃದಯ ರೋಗ, ಕ್ಯಾನ್ಸರ್, ಸ್ಪೈನಲ್ ಕಾರ್ಡ, ಕಿಡ್ನಿ ವೈಪಲ್ಯ ಹಾಗೂ ಮೆದುಳು ಸಂಬಂಧಿಸಿದ ಕಾಯಿಲೆಗಳು). (ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ರಚಿಸಿದ ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣಪತ್ರವನ್ನು ಸಲ್ಲಿಸಿರಬೇಕು).
2.1೦ ವರ್ಷ ವಯಸ್ಸು ಮೀರದಿರುವ ಅಪ್ರಾಪ್ತ ಮಕ್ಕಳಿರುವ ವಿಧವೆ ಹಾಗೂ ವಿಧುರ ಪ್ರಕರಣಗಳು. (ಪೂರಕ ದಾಖಲೆಗಳನ್ನು ಸಲ್ಲಿಸುವುದು.)
3.ಶೇಕಡಾ 4೦ ಕ್ಕೂ ಮೇಲ್ಪಟ್ಟು ಅಂಗವಿಕಲತೆ ಹೊಂದಿರುವ ಅಂಗವಿಕಲ ನೌಕರರ ಪ್ರಕರಣಗಳು : (ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ರಚಿಸಿದ ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣಪತ್ರವನ್ನು ಸಲ್ಲಿಸತಕ್ಕದ್ದು).
(ಈ ಮೇಲ್ಕಂಡ ೦3 ಪ್ರಕರಣಗಳಲ್ಲಿನ ಉದ್ಯೋಗಿಗಳು ಕನಿಷ್ಠ ಪರೀಕ್ಷಾರ್ಥ ಸೇವೆಯ ಮೇಲೆ ನಿಯೋಜಿಸಿರಬೇಕು ಇವರುಗಳಿಗೆ ಕೇವಲ ಸೇವಾವಧಿಯಲ್ಲಿ ಮಾತ್ರ ವಿನಾಯತಿ ಇರುತ್ತದೆ.)
4.ಪತಿ / ಪತ್ನಿ ಪ್ರಕರಣಗಳು: ಖಾಯಂ ಸಿಬ್ಬಂದಿಯಾಗಿದ್ದು, ಇದರಲ್ಲಿ ಒಬ್ಬರು ಅವರ ಹುದ್ದೆಯಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿರಬೇಕು(ಇಬ್ಬರು ಸರಕಾರಿ / ನಿಗಮ, ಮಂಡಳಿ ಹಾಗೂ ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ನೌಕರರಾಗಿದ್ದಲ್ಲಿ ಮಾತ್ರ ಅನ್ವಯಿಸುತ್ತದೆ. ಆಯಾ ಇಲಾಖೆಯ ಸೂಕ್ತ ಪ್ರಾಧಿಕಾರದಿಂದ ಧೃಢೀಕರಣ ಪತ್ರ ಪಡೆದು ಸಲ್ಲಿಸುವುದು.)
5.ಪರಸ್ಪರ ವರ್ಗಾವಣೆ ಪ್ರಕರಣಗಳು: ಖಾಯಂ ಸಿಬ್ಬಂದಿಯಾಗಿದ್ದು, ಇಬ್ಬರೂ ಸಹ ಪ್ರಸ್ತುತ ನಿಯೋಜಿಸಿರುವ ಸ್ಥಳದಲ್ಲಿ ಕನಿಷ್ಠ ಎರಡು ವರ್ಷಗಳ ಸೇವೆ ಸಲ್ಲಿಸಿರಬೇಕು. (ಪ್ರಸ್ತುತ ಕಾರ್ಯಸ್ಥಳದಲ್ಲಿ ಪರೀಕ್ಷಾರ್ಥ ದಿನಾಂಕದಿಂದ ಅಥವಾ ವಿಭಾಗ / ಘಟಕಕ್ಕೆ ವರ್ಗಾವಣೆಗೊಂಡ ಹಾಜರಾದ ದಿನಾಂಕದಿಂದ).